
ಧಾರವಾಡ
ಅಟೋ ಬೈಕ್ ಹಾಗೂ ಕಾರ್ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಅಟೋ ಚಾಲಕರಿಗೆ ಗಾಯವಾಗಿ ಕಾರ್‌ನಲ್ಲಿದವರು ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಧಾರವಾಡ ಹೊರವಲಯದ ಕಲಘಟಗಿ ರಸ್ತೆ ನುಗ್ಗಿಕೇರಿಯಲ್ಲಿ ನಡೆದಿದೆ.
ಅಟೋ ಮತ್ತು ಬೈಕ್ ನಡುವೆ ಮೊದಲು ಅಪಘಾತ ನಡೆದಿದ್ದು, ಈ ವೇಳೆ ಹಿಂಬದಿಯೇ ಬರುತ್ತಿದ್ದ ಕಾರ ಕೂಡಾ ನಡೆಯುತ್ತಿದಂತೆ ತಪ್ಪಿಸಲು ಹೋಗಿ ರಸ್ತೆ ಪಕ್ಖದ ಕಂಪೌಡವೊಂದಕ್ಕೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಬೈಕ ಅಟೋ ಚಾಲಕರಿಬ್ಬರಿಗೆ ಗಾಯವಾಗಿದ್ದು, ಕಾರ್‌ನಲ್ಲಿ ಜೆಎಸ್‌ಎಸ್ ಮಾಹಾವಿದ್ಯಾಲಯದ ವಿಜ್ಞಾನ ವಿಭಾಗದ ಪ್ರಾಶುಂಪಾಲರ ರವಿವರ್ಮಾ ಜೋಶಿ ಸ್ವಲ್ಪದರಲ್ಲಿಯೇ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇನ್ನೂ ಅಒಘಾತದ ವಿಷಯ ತಿಳಿಯುತ್ತಿದಂತೆ, ವಿದ್ಯಾಗಿರಿ ಪೊಲೀಸರು ಸೇರಿದಂತೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.