
ಬೆಂಗಳೂರು: ಅಧಿಕಾರದಲ್ಲಿ ಇಲ್ಲದೆ ಇದ್ದಾಗ ಬೆಲೆ ಏರಿಕೆಯ ವಿರುದ್ಧ ವಿರುದ್ಧ ಹೋರಾಟ ಮಾಡಿ ಹಾಗೂ ಚುನಾವಣೆ ವೇಳೆ ರಾಜ್ಯದ ಮತದಾರರಿಗೆ ಗ್ಯಾರಂಟಿ ಘೋಷಣೆ ಮಾಡಿ ಕೊನೆಗೆ ಅಧಿಕಾರದ ಗದ್ದುಗೆ ಹಿಡಿಯಲು ಯಶಸ್ವಿಯಾಗಿರೋ ರಾಜ್ಯದ ಕಾಂಗ್ರೆಸ್ ಸರ್ಕಾರ ಈಗ ಪದೇ ಪದೇ ಬೆಲೆಗಳ ಏರಿಕೆ ಮಾಡುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗುತ್ತಲ್ಲೇ ಬಂದಿದ್ದು, ಈಗ ಬಿಯರ್ ಬೆಲೆ ಏರಿಕೆ ಮಾಡುವ ಮೂಲಕ ಪ್ರಿಯರ ಕೆಂಗಣ್ಣಿಗೂ ರಾಜ್ಯ ಸರ್ಕಾರ ಗುರಿಯಾಗಿದೆ.
ಹೌದು… ಸದ್ದೇ ಇಲ್ಲದೆ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ವಿದ್ಯುತ್ ಬಿಲ್, ಹಾಲಿನ ಬೆಲೆ, ಬಸ್ಸ ದರ ಸೇರಿ ಲಿಕ್ಕರ್ ದರವನ್ನು ಹಂತ ಹಂತವಾಗಿ ಏರಿಕೆ ಮಾಡುತ್ತಾ ಬಂದಿದ್ದು, ಈಗ ಮತ್ತೆ ಅಬಕಾರಿ ಇಲಾಖೆಯ ಬಿಯರ್ ದರ 30 ರಿಂದ 50 ರೂಪಾಯವರೆಗೆ ಏರಿಕೆ ಮಾಡು ಮೂಲಕ ಬಿಯರ್ ಪ್ರಿಯರಿಗೆ ಶಾಕ ನೀಡಿದೆ. ಪ್ರತಿಯೊಂದು ಬಿಯರ್ ಪ್ರೈಸ್ ಆಗಿದ್ದು, ಟೆನ್ಶನ ಕಡಿಮೆ ಮಾಡಿಕೊಳ್ಳ ಬಿಯರ್ ಬಾಟಲ್ ಹಿಡಿಯುವ ಕೈಗಳಿಗೆ ಬೆಲೆ ಏರಿಕೆಯ ಬಿಸಿ ದೊಡ್ಡದಾಗಿಯೇ ತಟ್ಟಿದೆ.
ಹೆಚ್ಚಾಗಿ ಸೇಲ್ ಆಗುವ ಒವರ ಕೂಲ್, ಬುಲೆಟ್, ಲೆಜೆಂಡ್, ಸೇರಿದಂತೆ ಎಲ್ಲ ಬಿಯರ್‌ಗಳ ಬೆಲೆ 30 ರಿಂದ 50 ರೂಪಾಯಿ ವರೆಗು ಜಂಪ್ ಆಗಿದೆ. ಬಾಟಲಗಳ ಮೇಲೆ ಓಲ್ಡ್ ಏಂಆರ್‌ಪಿ ಇದ್ದು, ಪ್ರೈಸ್ ಹೈಕ್ ಮಾಡಿರುವುದು ಬಿಯರ್ ಪ್ರಿಯರನ್ನು ಶಾಕ್ ಮಾಡುವಂತ್ತೆ ಮಾಡಿದೆ. ಪ್ರೈಸ್ ಹೈಕ್ ಮಾಡಿದ ಮೇಲೆ ಬಾಟಲ್‌ಗಳ ಮೇಲೆ ಹೈಕ್ ಆಗಿರುವ ಬೆಲೆ ನಮೂದು ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಬೆಕಾಗಿರುವುದು ಅಬಕಾರಿ ಇಲಾಖೆ ಹಾಗೂ ಸರ್ಖಾರದ ಜವಾಬ್ದಾರಿ ಆಗಿರುತ್ತದೆ. ಒಂದು ಕಡೆ ಎಂ ಆರ್‌ಪಿ ರೇಟ್ ಹೇಚ್ಚಿಗೆ ಯಾರು ಕೊಡಬಾರದು ಎಂದು ಹೇಳುತ್ತೆ, ಇನ್ನೊಂದು ಕಡೆ ಓಲ್ಡ್ ಎಂಅರ್‌ಪಿ ರೇಟ್ ತೋರಿಸಿ ಬೆಲೆ ಹೆಚ್ಚಾಗಿದೆ ಎಂದು ಬಿಯರ್ ಶಾಪಗಳು ದುಡ್ಡು ತೆಗೆದುಕೊಳ್ಳುತ್ತಿವೆ. ಯಾರನ್ ನಂಬುವುದು ಎಂದು ಬಿಯರ್ ಪ್ರಿಯರು ಮದ್ದಲೆ ಗೊಣಗುವಂತಾಗಿದೆ.
ಒಟ್ಟಿನಲ್ಲಿ ಈ ಹಿಂದೆ ಬೆಲೆ ಎರಿಕೆ ವಿರುದ್ಧ ರಸ್ತೆಗೆ ಬಂದು ಹೋರಾಟ ಮಾಡವುದರ ಜತೆಗೆ ಗ್ಯಾರಂಟಿ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದಿರೋ ಕಾಂಗ್ರೆಸ್ ಸರ್ಕಾರ ಅಧಿಕಾರ ಸಿಕ್ಕ ಮೇಲೆ ಸಿಕ್ಕ ಸಿಕ್ಕ ಹಾಗೇ ಬೆಲೆಗಳ ಏರಿಕೆ ಮಾಡುತ್ತಾ ಬಂದಿದ್ದು, ಈಗ ಬಿಯರ್ ಪ್ರಿಯರ್ ಪಾಕೆಟ್‌ಗೂ ಕತ್ತರಿ ಹಾಕಿದ್ದು, ಮತ್ತೆ ಯಾವ್ಯಾವ ಉದರಲ್ಲಿ ಬೆಲೆ ಏರಿಕೆ ಮಾಡುತ್ತೆ ಅನ್ನುವುದೆರ ರಾಜ್ಯ ಜನತೆ ಚಿಂತೆಯಾಗಿದೆ.