
ಪಬ್ಲಿಕ್ ರೈಡ್ ವಿಜಯಪುರ
ಗುಂಡು ಹಾರಿಸಿ ಯುವಕನ ಹತ್ಯೆಗೈದ ಘಟನೆ ವಿಜಯಪುರದ ತಿಕೋಟಾ ತಾಲ್ಲೂಕಿನ ಭಂಡಾರ ವಸ್ತಿಯಲ್ಲಿ ನಡೆದಿದೆ. ಗುಂಡಿನ ದಾಳಿಗೆ ಮೃತಪಟ್ಟವನ್ನು ಸತೀಶ ಪ್ರೇಮಸಿಂಗ್ ರಾಠೋಡ ಎಂದು ಗುರುತಿಸಲಾಗಿದೆ. ಅರಕೇರಿ ತಾಂಡಾದ ನಿವಾಸಿಯಾಗಿದ್ದ ಸತೀಶ ಮೇಲೆ ರಮೇಶ ಎಂಬಾತನಿಂದ ಗುಂಡಿನ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಒಂದು ವರ್ಷದ ಹಿಂದೆ ಬಾವಿಗೆ ಹಾರಿ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡ ಕಾರಣ ಸತೀಶನೆ ಎಂದು ಸೇಡು ಇಟ್ಟುಕೊಂಡಿದ್ದ ರಮೇಶ್ ಇದೀಗ ದಾಳಿ ನಡೆಸಿದ್ದಾನೆ. ಗಲಾಟೆಯಲ್ಲಿ ಸತೀಶ್ ನಿಂದ ಚೂರಿ ಇರಿಯಲು ಪ್ರಯತ್ನಿಸಿದಾಗ ರಮೇಶ ತನ್ನ ರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿ ಕೈಯಲ್ಲಿ ಪಿಸ್ತೂಲ್ ಇಟ್ಟು ಪರಾರಿಯಾಗಿದ್ದಾನೆ ಎಂಬುದು ಸ್ಥಳೀಯರ ಗಮನಕ್ಕೆ ಬಂದಿದೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.