April 18, 2025

ಸಿಎಂ ಸಿದ್ದರಾಮಯ್ಯವರು‌ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಜಿಲ್ಲಾ ಕೇಂದ್ರಗಳಲ್ಲಿ ಜನತಾ ದರ್ಶನ ನಡೆಸಲು ಸೂಚನೆ ಮೇರೆಗೆ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಇಂದು ಧಾರವಾಡದಲ್ಲಿ ಜನತಾ ದರ್ಶನ‌ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ‌

ನಗರದ ಜಿಲ್ಲಾ‌ ಪಂಚಾಯತಿ ಸಭಾ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಅಧ್ಯಕ್ಷತೆಯಲ್ಲಿ ಜನತಾ ದರ್ಶನ‌ ನಡೆಸಲಾಗಿದ್ದು, ಲಾಡ್ ಅವರಿಗೆ ನವಲಗುಂದ ಶಾಸಕ ಎನ್ ಹೆಚ್ ಕೊನರೆಡ್ಡಿ ಸಾಥ್ ನೀಡಿದರು. ಇನ್ನೂ ಸಭಾಭವನದಲ್ಲಿ ಸಾರ್ವಜನಿಕರು ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ತಮ್ಮ‌ ಸಮಸ್ಯೆಗಳನ್ನು ಹೇಳಿಕೊಂಡು ಲಿಖಿತವಾಗಿ ಅರ್ಜಿ ನೀಡಿದರು.

ಸರದಿ ಸಾಲಿನಲ್ಲಿ ಅರ್ಜಿ ನೀಡಿದ ಸಾರ್ವಜನಿಕರ ಅಹವಾಲು ಆಲಿಸಿದ ಉಸ್ತುವಾರಿ ಸಚಿವರು, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದನೆ ಮಾಡಬೇಕು. ಜನತೆ ನಮ್ಮ ಬಳಿ ಅರ್ಜಿ ಹಿಡಿದು ಬರುವವರ ಸಂಖ್ಯೆ ಕಡಿಮೆಯಾದಾಗ ನೀವು ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದಾರಾ ಅಂತಾ ತಿಳಿಯುತ್ತದೆ. ಆದರೆ ಜನರು ಈಗಲೂ ಅರ್ಜಿ ಹಿಡಿದು ಬರುತ್ತಿರುವುದನ್ನು ನೋಡಿದ್ದರೆ, ನಿಮ್ಮ ಖಾರ್ಯ ವೈಖರಿಯ ಬಗ್ಗೆ ನೀವೆ ತಿಳಿಯಬೇಕು ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ‌ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ವಿವಿಧ ಇಲಾಖೆಯ ಮುಖ್ಯ ಅಧಿಕಾರಿಗಳು‌ ಉಪಸ್ಥಿತರಿದ್ದರು.

ಪಬ್ಲಿಕ್ ರೈಡ್ ಧಾರವಾಡ 

Leave a Reply

Your email address will not be published. Required fields are marked *

error: Content is protected !!