
ಪಬ್ಲಿಕ್ ರೈಡ್ ಧಾರವಾಡ
ರಸ್ತೆ ಪಕ್ಕ ನಿಂತಿದ್ದ ಕಾರವೊಂದಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಬೈಕ್ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ ಸವಾರರಿಬ್ಬರಿಗೆ ಗಂಭೀರವಾದ ಗಾಯವಾಗಿರುವ ಘಟನೆ ರಾಯಾಪುರ ಬಳಿಯ ಇಸ್ಕಾನ್ ಟೆಂಪಲ್‌ನ ಹುಬ್ಬಳ್ಳಿಧಾರವಾಡ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಹುಬ್ಬಳ್ಳಿ ಧಾರವಾಡ ಮುಖ್ಯ ರಸ್ತೆಯ ರಾಯಾಪುರ ಬಳಿಯ ಇಸ್ಕಾನ ಮಂದಿರದ ಬಳಿ ಈ ದುರ್ಘಟನೆ ಸಂಭವಿಸಿದೆ. ಇನ್ನೂ ಸ್ಕೂಟಿ ಬೈಕ ಹುಬ್ಬಳಿಯಿಂದ ಧಾರವಾಡ ಕಡೆ ತೆರಳುತಿತ್ತು ಎಂದು ತಿಳಿದು ಬಂದಿದ್ದು, ಈ ವೇಳೆ ಅತಿ ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ಕಾರ್ ಡಿಕ್ಕಿ ಹೊಡೆದಿದ್ದು, ಬೈಕನ ಚಾಲಕ ಸೇರಿ ಹಿಂಬದಿ ಸವಾರನಿಗೆ ಗಂಭೀರ ಗಾಯವಾಗಿದೆ.
ಓರ್ವನ ಕಾಲು ಮೂಳೆ ಮುರಿತವಾಗಿದ್ದು, ಘಟನೆ ನಡೆಯುತ್ತಿದಂತೆ ಸ್ಥಳೀಯರು ಗಾಯಾಳುಗಳನ್ನು ಅಂಬ್ಯೂಲೆನ್ಸ್ ಸಹಾಯದೊಂದಿಗೆ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಧಾರವಾಡ ಸುದ್ದಿ ನವೀನ ಪಿ ಎಸ್