
ಹುಬ್ಬಳ್ಳಿ
ಹುಬ್ಬಳ್ಳಿ ಹೊರವಲಯದ ರಿಂಗ್ ರೋಡ್‌ನಲ್ಲಿ ಅಪರಿಚಿತ ವ್ಯಕ್ತಿಯ ಮೇಲೆ ಭಾರಿ ಗಾತ್ರದ ವಾಹನಗಳು ಹರಿದ ಪರಿಣಾಮ ವ್ಯಕ್ತಿಯ ಮೃತ ದೇಹ ಛಿದ್ರ ಛಿದ್ರವಾದ ದಾರುಣ ಘಟನೆ ಕಳೆದ ದಿನ ತಡ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಂದಾಜು 65 ರಿಂದ 70 ವರ್ಷದ ಮೃತ ವ್ಯಕ್ತಿ ಭಿಕ್ಷುಕ ಎಂದು ಗುರುತಿಸಲಾಗಿದೆ. ಅಪರಿಚಿತ ಬಾರಿ ಗಾತ್ರದ ವಾಹನ ಹರಿದಿದ್ದರಿಂದ ವೆಕ್ತಿಯ ದೇಹದ ಎಲ್ಲಾ ಭಾಗಗಳು ಬೇರೆ ಬೇರೆಯಾಗಿವೆ. ರಸ್ತೆಯಲ್ಲಿ ಕೇವಲ ಮಾಂಸದ ಮುದ್ದೆಯ ರೂಪದಲ್ಲಿ ಭಿಕ್ಷುಕನ ಶವ ದೊರೆತಿದೆ. ಇನ್ನು ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಕ್ಷಣ ಸಂಚಾರಿ ಠಾಣೆಯ ಇನ್‌ಪೆಕ್ಟರ್ ಶ್ರೀಧರ್ ಸತಾರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬಟ್ಟೆಯೊಂದರಲ್ಲಿ ಸಲಾಕೆಯಿಂದ ದೇಹದ ವ್ಯಕ್ತಿಯ ಶವದ ಅವಶೇಷಗಳನ್ನು ತೆಗೆದು ಕಿಮ್ ಶವಾಗಾರಕ್ಕೆ ಕಳುಹಿಸಲಾಯಿತು. ಈ ಪ್ರಕರಣವು ದಕ್ಷಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ.