ಪಬ್ಲಿಕ್ ರೈಡ್ ಧಾರವಾಡ
ಖಾಸಗಿ ಸಾರಿಗೆ ಬಸ್ಸ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಅಪಘಾತವಾದ ಪರಿಣಾಮ ಬಸ್ಸನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿ ಬಾರಿ ಅನಾಹುತವೊಂದ ತಪ್ಪಿದ ಘಟನೆ ಧಾರವಾಡ ಬೇಲೂರು ಕೈಗಾರಿಕಾ ಪ್ರದೇಶದ ಬಳಿಯ ಸರ್ವಿಸ್ ರಸ್ತೆಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಬೇಲೂರು ಕೈಗಾರಿಕಾ ಪ್ರದೇಶದಿಂದ ಖಾಸಗಿ ಬಸ್ಸ ಹೊರ ಬರುತ್ತಿದ್ದು, ಲಾರಿ ಇಂಡಸ್ಟ್ರಿಯಲ್ ಏರಿಯಾ ಒಳಗೆ ತೆರಳುವ ವೇಳೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಇನ್ನೂ ಘಟನೆಯಲ್ಲಿ ಖಾಸಗಿ ಬಸ್ಸನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಇನ್ನೂ ಅಪಘಾತದಲ್ಲಿ ಎರಡು ವಾಹನಗಳ ಮುಖಾಮುಖಿ ಡಿಕ್ಕಿಯಿಂದ ವಾಹನಗಳ ಮುಂಭಾಗ ಜಖಂಗೊಂಡಿವೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡು ಕಾನೂನು ಕ್ರಮ ಜರುಗಿಸಿದ್ದು, ಪೊಲೀಸರ ಪ್ರಾಥಮಿಕ ತನಿಖೆಯ ನಂತರ ಗಾಯಾಳು ಸೇರಿ ಅಪಘಾತದಲ್ಲಿ ಯಾರದು ತಪ್ಪಿದೆ ಎಂಬುವುದು ತಿಳಿದು ಬರಬೇಕಾಗಿದೆ.