
ಪಬ್ಲಿಕ್ ರೈಡ್ ನ್ಯೂಸ್ ಧಾರವಾಡ
ಕಾರ್ ಹಾಗೂ ಲಾರಿಯ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಕಾರನಲ್ಲಿದ್ದವರಿಗೆ ಅದೃಷ್ಟವಶಾತ್ ಚಿಕ್ಕಪುಟ್ಟ ಗಾಯವಾಗಿ ದೊಡ್ಡ ದುರಂತವೊಂದ ತಪ್ಪಿದ ಘಟನೆ ಧಾರವಾಡ ಹೊರವಲಯದ ಕೆಲಗೇರಿ ಬಳಿಯ ಬೈಪಾಸ್ ನಲ್ಲಿ ನಡೆದಿದೆ.
ಧಾರವಾಡ ಕೆಲಗೇರಿ ಬಳಿಯ ಬೈಪಾಸ್ ನಲ್ಲಿ ಗುರುವಾರ ತಡ ಸಂಜೆ ಜಿಟ್ಟಿಜಿಟ್ಟಿ ಮಳೆಯ ನಡುವೆ ಈ ದುರ್ಘಟನೆ ಸಂಭವಿಸಿದೆ. ಶಿಫ್ಟ್ ಕಾರ್ ಮತ್ತು ಗ್ಯಾಸ್ ಲಾರಿ ನಡುವೆ ಈ ಅಪಘಾತದಿಂದಾಗಿ ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ಅಪಘಾತ ನಡೆಯುತ್ತಿದಂತೆ ಸ್ಥಳೀಯ ವಾಹನ ಸವಾರರು ಕಾರಿನಲ್ಲಿದ್ದವರ ರಕ್ಷಣೆ ಮಾಡಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಧಾರವಾಡ ಉಪನಗರ ಠಾಣೆಯ ಪೊಲೀಸರು ಹಾಗೂ ಸಂಚಾರಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಧಾರವಾಡ ಉಪನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರ ಪ್ರಾಥಮಿಕ ತನಿಖೆಯ ನಂತರವಷ್ಟೇ ಗಾಯಾಳುಗಳ ವಿವರ ತಿಳಿಿದು ಬರಬೇಕಿದೆ.