
ಪಬ್ಲಿಕ್ ರೈಡ್ ಸುದ್ದಿ ಹುಬ್ಬಳ್ಳಿ – ಪದ್ಮಭೂಷಣ ಪ್ರಶಸ್ತಿ ಪುರಸ್ಕ್ರತರಾದ ದಿವಂಗತ ಶ್ರೀ ಗಂಗೂಬಾಯಿ ಹಾನಗಲ್ ಗುರುಕುಲ ಶಿಕ್ಷಣ ಸಂಸ್ಥೆಯನ್ನು, ಗುರು ಶಿಷ್ಯರ ಪರಂಪರೆಯಲ್ಲಿಯೆ ಮಂದುವರೆಯಬೇಕು ಹಾಗೂ 2022 ನೇ ಸಾಲಿನ ವಿದ್ಯಾರ್ಥಿಗಳ ಶಿಕ್ಷಣ ಅಲ್ಲಿಯೇ ಮುಂದುವರೆಸವಂತೆ ಅಗ್ರಹಿಸಿ, ಹುಬ್ಬಳ್ಳಿಯಲ್ಲಿ ಎಬಿವಿಪಿಯಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕುದರು.
ನಗರದ ದಿವಂಗತ ಶ್ರೀ ಗಂಗೂಬಾಯಿ ಹಾನಗಲ್ ಗುರುಕುಲ ಮುಂಭಾಗದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಸಂಗೀತ ವಾದ್ಯಗಳೊಂದಿಗೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿರುವುದು ಎಲ್ಲರ ಗಮನ ಸೆಳೆಯಿತು.
ಈಗಾಗಲೇ ಸರಿಯಾದ ರೀತಿಯಲ್ಲಿ ನಿರ್ವಹಣೆ ಇಲ್ಲದೆ ಧಾರವಾಡದಲ್ಲಿನ ಗಂಗೂಬಾಯಿ ಹಾನಗಲ್ ಅವರ ಬೆಳೆದ ಮನೆಯ ಮ್ಯೂಸಿಯಂ ಪಾಳು ಬಿದ್ದಿದೆ.ಹುಬ್ಬಳ್ಳಿಯ ಗಂಗೂಬಾಯಿ ಸಂಗೀತ ಮಾಹಾವಿದ್ಯಾಲಯದಲ್ಲಿಯು ಅದೇ ನಿರ್ಲಕ್ಷ್ಯ ಕಂಡುಬರುತ್ತಿದೆ.
ಗುರುಕುಲ ಶಿಕ್ಷಣ ಪದ್ದತಿ ಹಾಗೂ ಗುರು ಶಿಷ್ಯರ ಪರಂಪರೆಯಯಲ್ಲಿಯೆ ಸಂಗಿತ ಶಿಕ್ಷಣ ಮುಂದುವರೆಯಬೆಕಾದರೆ, ಇಲ್ಲಿನ ಗುರುಕುಲವನ್ನು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಗೆ ಗುರುಕುಲ ಪದ್ದತಿಯಂತೆಯೆ ಶಿಕ್ಷಣ ಮುಂದುವರೆಯಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ನಿರ್ಲಕ್ಷ್ಯ ಕಂಡು ಬಂದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.