
ಹುಬ್ಬಳ್ಳಿ
ಕಳೆದ ನವೆಂಬರ್ 14 ರಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಯುವತಿಯನ್ನು ಬೈಕ್ ಮೇಲೆ ಫಾಲೋ ಮಾಡಿಕೊಂಡು ಬಂದು ಚುಡಾಯಿಸಿ ಮಾನಸಿಕವಾಗಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಳೇ ಹುಬ್ಬಳ್ಳಿ ಪೊಲೀಸರು 5 ಜನ ಬೀದಿ ಕಾಮಣ್ಣರನ್ನು ಹೆಡೆಮುರಿ ಕಟ್ಟಿ ಕಂಬಿ ಹಿಂದೆ ತಳ್ಳಿದ್ದಾರೆ.
ವೈ- ಹಳೇ ಹುಬ್ಬಳ್ಳಿಯ ಅಯೋಧ್ಯ ನಗರ ನಿವಾಸಿ ಶುಭಂ ತಡಸ, ಮೆಹಬೂಬ್ ಹಿತ್ತಲಮನಿ ಬೈಕ್ ಮೇಲೆ ಬಂದು ಯುತಿಗೆ ಚುಡಾಯಿಸಿದ್ದ ಆರೋಪಿಗಳಾಗಿದ್ದು, ಇನ್ನೂ ಈ ಇಬ್ಬರು ಆರೋಪಗಳಿಗೆ ಸಹಕರಿಸಿದ ನವ್ ಆಯೋಧ್ಯ ನಗರದ ಸಾಗರ್ ಸಾತಪುತೆ, ಶ್ರೀವತ್ಸ ಬೆಂಡಿಗೇರಿ, ಸಚಿನ್ ನರೇಂದ್ರ ಮೂವರು ಸೇರಿ ಒಟ್ಟು ಐದು ಜನ ಬೀದಿ ಕಾಮಣ್ಣರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರಿಂದ 6 ಮೊಬೈಲ್ ಫೋನ್ ಸೇರಿ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ಪಶಪಡಿಸಿಕೊಳ್ಳಲಾಗಿದೆ. ಮಾದ್ಯಮಗಳ ವರದಿ ಜತೆಗೆ ಸೊಸಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಾಲ್ ಬೆನ್ನಲ್ಲೇ ಯುವತಿಯ ಕುಟುಂಬಸ್ಥರಿಂದ ದೂರು ಪಡೆದುಕೊಂಡೂ ಹಳೇ ಹುಬ್ಬಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ಎಸ್ ಹೆಚ್ ಯಳ್ಳೂರ ಮತ್ತು ಅವರ ತಂಡ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರ ಮೇಲೆ ಬಿಎನ್‌ಎಸ್ ಮತ್ರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಂಬಿ ಹಿಂದೆ ತಳ್ಳಿದಾರೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.