April 18, 2025

ಪಬ್ಲಿಕ್ ರೈಡ್ ಧಾರವಾಡ

ಮುಡಾ ಹಗರಣ ಕೇವಲ 14 ಸೈಟ್ ಅಷ್ಟೇ ಅಲ್ಲ, ಇದು ಬರೊಬ್ಬರಿ 5 ಸಾವಿರ ಕೋಟಿ ಹಗರಣ ಆಗಿದೆ. ಈಗ ಇಡಿ ಮುಡಾ ಕಚೇರಿಯ ಮೇಲೆ ದಾಳಿ ಮಾಡಿದೆ, ಈ ದಾಳಿ ಏನೂ ಅನ್‌ಸ್ಪೇಕ್ಟಡ್ ಅಲ್ಲ ನಿರೀಕ್ಷಿತ ದಾಳಿಯಾಗಿದೆ ಎಂದು ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಡಾ ಹಗರಣ ರಾಜ್ಯ ಕಂಡ ದೊಡ್ಡ ಹಗರಣವಾಗಿದೆ. ಆದರೆ ಇದರಲ್ಲಿ ಸಿಎಂ ಬೇರೆ ಕಾರಣ ಕೊಟ್ಟು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ಬೇರೆಯವರನ್ನು ಬಲಿಪಶು ಮಾಡಲು ಯತ್ನಿಸುತ್ತಿದ್ದಾರೆ. ಬಳಿಕ ಆ ನಿವೇಶನ ಮರಳಿ ಕೊಟ್ಟರು, ಇತ್ತೀಚೆಗೆ ಮುಡಾ ಅಧ್ಯಕ್ಷ ಮರಿಗೌಡರಿಂದ ರಾಜೀನಾಮೆ ಕೊಡಿಸಿದರು. ತಪ್ಪಿಲ್ಲದಿದ್ದರೆ ಅವರ ರಾಜೀನಾಮೆ ಏಕೆ ಕೊಡಿಸಬೇಕಿತ್ತು, ಮರಿಗೌಡರೇ ಇದನ್ನು ಮಾಡಿದ್ದಾರೆ ಅಂತಾ ತೋರಿಸಲು ಈ ಥರ ಮಾಡಿದ್ದಾರೆ. ಮುಡಾ ಮತ್ತು ವಾಲ್ಮೀಕಿ ಹಗರಣದ ಹಗ್ಗ ಕೊರಳಿಗೆ ಬಿಗಿಯುತ್ತಿದೆ, ದಿನದಿಂದ ದಿನಕ್ಕೆ ಅದು ಗಟ್ಟಿಯಾಗುತ್ತಾ ಸಾಗಿದೆ. ಇಂದು ಇ ಡಿ ದಾಳಿ ಮಾಡಿ, ಹೆಚ್ಚಿನ ದಾಖಲೆ ತಮ್ಮ ವಶಕ್ಕೆ ಪಡೆದಿದ್ದಾರೆ ಅನ್ನೋ‌ ಮಾಹಿತಿ ಇದೆ, ಸಿದ್ದರಾಯ್ಯನವರು ಸಿಎಂ ಆಗಿ ಕೆಲವೇ ದಿನ ಇರಲಿದ್ದಾರೆ.

ಕೊಂಚ ದಿನಗಳಲ್ಲಿ ಅವರು ರಾಜೀನಾಮೆ ಕೊಡೋ ಸ್ಥಿತಿ ಬರಲಿದೆ. ಇನ್ನೂ ಮುಡಾ ಹಗರಣದ ಲೋಕಾಯುಕ್ತ ತನಿಖೆ ನಿಧಾನಗತಿ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಹಿಂದೆ 2013 ರಲ್ಲಿ ಸಿದ್ದಾರಮಯ್ಯನವರೇ ಲೋಕಾಯುಕ್ತವನ್ನು ರದ್ದು ಮಾಡಿದ್ದರು. ಇದೀಗ ಮತ್ತೆ ಲೋಕಾ ಬಂದರೂ ಅವರಿಗೆ ಕೆಲಸ ಮಾಡಲು ಸ್ವಾತಂತ್ರ್ಯ ಕೊಟ್ಟಿಲ್ಲ, ಮುಡಾ ಹಗರಣ ದೊಡ್ಡದಾಗಿದ್ದರಿಂದ ಇ ಡಿ ಎಂಟ್ರಿಯಾಗಿದೆ. ಇದೀಗ ಸರಿಯಾದ ತನಿಖೆಯಾಗಲಿದೆ. ಸಿಎಂ ಬದಲಾವಣೆ ಇಲ್ಲ ಅನ್ನೋ ಕೈ ನಾಯಕರ ಹೇಳಿಕೆ ನೀಡುತ್ತಿದ್ದಾರೆ,

ಅವರು ಹಾಗೆ ಹೇಳುತ್ತಾರೆ ಪಕ್ಕದಲ್ಲಿಯೇ ಐವರು ಟಾವೆಲ್ ಹಾಕಿರುತ್ತಾರೆ. ಈಗಾಗಲೇ ಡಿಕೆಶಿ, ಜಾರಕಿಹೊಳಿ, ಪರಂ, ಎಂ.ಬಿ.ಪಾಟೀಲ್, ಖರ್ಗೆ ಇವರಲ್ಲಿ ಯಾರು ಸಿಎಂ ಆಗ್ತಾರೆ ಅನ್ನೋದನ್ನು ಜನರು ನೋಡುತ್ತಿದ್ದಾರೆ. ಜಾತಿ ಗಣತಿ ವಿಚಾರ ವಿಷಯವಾಗಿ ಮಾತನಾಡಿ, ಇದೀಗ ಬಂದಿರೋ ಕಾಂತರಾಜು ಅವರದ್ದು ವರದಿ ಅದು ಜಾತಿ ಗಣತಿ ಅಲ್ಲ. ಕಾಂತರಾಜು ಅವರದ್ದು ಸಮೀಕ್ಷೆ, ಬದಲಿಗೆ ಜನಗಣತಿ ಅಲ್ಲ. ಚುನಾವಣೆಯ ಸಮೀಕ್ಷೆಗಳೂ ನಡೆಯುತ್ತವೆ. ಬೇರೆ ಬೇರೆ ಸಂಸ್ಥೆಗಳು ಸಮೀಕ್ಷೆ ಮಾಡಿರುತ್ತವೆ, ಒಂದೊಂದು ಬೇರೆ ಬೇರೆಯಾಗಿರುತ್ತವೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!