
ಪಬ್ಲಿಕ್ ರೈಡ್ ಪೀಣ್ಯ ದಾಸರಹಳ್ಳಿ: ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಅಕಾಡೆಮಿ ಹಾಗೂ ಇಚ್ಚಾ ಫೌಂಡೇಶನ್ ವತಿಯಿಂದ ತಮಿಳುನಾಡಿನ ಹೊಸೂರಿನಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಸಮಾರಂಭ ಜರುಗಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಡಾ.ಸಂಗನ ಬಸಪ್ಪ ಬಿರಾದರ್ ಅವರು ಮಾತನಾಡಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಾಗೂ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಸೇವೆ ಮತ್ತು ವಿವಿಧ ಸಮಾಜದಲ್ಲಿನ ಹೋರೆ ಕೋರೆಗಳನ್ನು ತಿದ್ದುವ ಕಾರ್ಯವನ್ನು ಸಾಧಕರಾಗಬೇಕು ಹಾಗೂ ಉಳ್ಳವನು ಶಿವಾಲಯ ಮಾಡುವ ನೈಯ ನಾನೇನು ಮಾಡಲೈಯ್ಯಾ ಬಡವನೆಯ ನನ್ನ ಕಾಲುಗಳೇ ಕಂಬಗಳಯ್ಯ ನನ್ನ ದೇಹವೇ ದೇಗುಲವಯ್ಯ ಶಿರವೇ ಹೊನ್ನ ಕಳಸವಯಾ ಶರಣು ಶರಣಾರ್ಥಿ ಬಸವಣ್ಣ ಮತ್ತು ಬುದ್ಧನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು.
ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿಯವರು ಸಾಧಕರನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದ್ದು ತುಂಬಾ ಖುಷಿಯಾಗಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಬಡವರಿಗೆ ಹಾಗೂ ಕಾರ್ಮಿಕರಿಗೆ ಸಹಾಯ ಮಾಡಿ ಅವರ ಉನ್ನತಿಗೆ ಹೆಚ್ಚು ಹೊತ್ತು ನೀಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಏಷ್ಯಾ ಇಂಟರ್ನಾಷನಲ್ ಕಲ್ಚರಲ್ ಅಕಾಡೆಮಿಯ ಸಂಸ್ಥಾಪಕ ರಾದ ಬಾಬು ವಿಜಯನ್, ಆಂಧ್ರಪ್ರದೇಶದ ನಿವೃತ್ತ ನ್ಯಾಯಮೂರ್ತಿಗಳಾದ ಹರಿದಾಸ್, ತಮಿಳುನಾಡಿನ ಮಾಜಿ ಶಾಸಕ ಮನೋಕರನ್, ಕನ್ನಡ ಚಿತ್ರನಟಿ ಸುಮತಿ ಶ್ರೀ, ಏಕತಾ ಫೌಂಡೇಶನ್ ಬಸವಯೋಗಿ ಗುರೂಜಿ, ಮುಂತಾದವರು ಉಪಸ್ಥಿತರಿದ್ದರು.