
ಪಬ್ಲಿಕ್ ರೈಡ್ ನ್ಯೂಸ್
ಪೀಣ್ಯ ದಾಸರಹಳ್ಳಿ: ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೈಗೊಂಡಿರುವ ಗ್ಯಾರಂಟಿ ಕಾರ್ಯಕ್ರಮಗಳನ್ನು ಪ್ರತಿ ಮನೆಗಳಿಗೂ ತಿಳಿಸುವ ಜವಾಬ್ದಾರಿ ಭೂತ ಅಧ್ಯಕ್ಷರ ಹಾಗೂ ವಾರ್ಡ್ ಅಧ್ಯಕ್ಷರುಗಳು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊಫೆಸರ್ ಎಂ.ವಿ ರಾಜೀವ್ ಗೌಡ ತಿಳಿಸಿದರು. ಮಾಜಿ ಶಾಸಕ ಆರ್.ಮಂಜುನಾಥ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ವೇಳೆ ಬಾಗಲಗುಂಟೆ ವಾರ್ಡ್ ಮುಖಂಡ ಹರೀಶ್ ಪಾರ್ಥವರ ನೇತೃತ್ವದಲ್ಲಿ ಹಲವಾರು ಬೇರೆ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು ಈ ಸಂದರ್ಭದಲ್ಲಿ ಮಾಜಿ ನಗರ ಸಭಾ ಅಧ್ಯಕ್ಷ ಕೆ ಸಿ.ಅಶೋಕ್, ಮಾಜಿ ಪಾಲಿಕೆ ಸದಸ್ಯ ಕೆ. ನಾಗಭೂಷಣ್, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷ ಕೆ.ಸಿ. ವೆಂಕಟೇಶ್ ,ಬಾಗಲಗುಂಟೆ ಬ್ಲಾಕ್ ಅಧ್ಯಕ್ಷ ಅನುಭವ ಜಗದೀಶ್, ಬಾಗಲಗುಂಟೆ ವಾರ್ಡ್ ಅಧ್ಯಕ್ಷ ಬಿಎಂ. ಜಗದೀಶ್, ಮುಖಂಡರಾದ ಹರೀಶ್ ಪಾರ್ಥ, ಸಚಿನ್ ಧರ್ಮಪ್ಪ, ಕೇಶವಾಚಾರಿ, ರಾಮಾಂಜಿ ಇನ್ನು ಹಲವಾರು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.