
Public Ride News ಹುಬ್ಬಳ್ಳಿ
ಸಂಬಂಧಿಕರು ಮನೆಯಲ್ಲಿ ಇಲ್ಲದನ್ನು ನೋಡಿಕೊಂಡು, ಆ ಮನೆಯ ಹತ್ತಿರದ ಸಂಬಂಧಿಯೊಬ್ಬ ಮಧ್ಯ ರಾತ್ರಿ ಮನೆಗೆ ನುಗ್ಗಿ ಮನೆಯ ಬೀಗ ಮುರಿದು ಕಳ್ಳತನ ಮಾಡಿ, ನಗದು ಹಣ ಸೇರಿ ಚಿನ್ನಾಭರಣಗಳನ್ನು ದೊಚ್ಚಿಕೊಂಡು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯ ಮದಿನಿ ಮಜೀದ್ ಬಳಿ ಕಳೆದ ಗುರುವಾರ ತಡ ರಾತ್ರಿ ನಡೆದಿದೆ.
ಹಳೇ ಹುಬ್ಬಳ್ಳಿಯ ನ್ಯೂ ಆನಂದ ನಗರದ ಮದಿನಿ ಮಜೀದ್ ಬಳಿಯ ಘಾಂಟಿವಾಲೆ ಬಿಲ್ಡಿಂಗ್‌ನ ಮೇಲೆ ಬಾಡಿಗೆ ನಿವಾಸಿಗಳಾದ ಅಬ್ದುಲ್ ರಜಾಕ್ ಎಂಬವವರ ಮನೆಯಲ್ಲಿಯೇ ಕಳ್ಳತನವಾಗಿದೆ. ಕಳೆದ ದಿನ ಅಗಸ್ಟ್ 8 ರಂದು ಅಬ್ದುಲ್ ರಜಾಕ್ ಅವರು ತಾವು ವಾಸವಿರುವ ಮನೆಯ ಬೀಗ್ ಹಾಕಿಕೊಂಡು ಕುಟುಂಬ ಸಮೇತವಾಗಿ ಊರಿಗೆ ತೆರಳಿದರಂತೆ. ಇದರ ಮಾಹಿತಿ ತಿಳಿದುಕೊಂಡಿದ್ದ ಅಬ್ದುಲ್ ರಜಾಕ್ ಅವರ ಹತ್ತಿರ ಸಂಬಂಧಿಯರೆ ಮಧ್ಯ ರಾತ್ರಿ ಮನೆಯ ಮುಖ್ಯ ದ್ವಾರದ ಬೀಗ್ ಮುರಿದು ಒಳಗೆ ನುಗ್ಗಿ, ಮನೆಯ ಲಾಕರ್‌ನಲ್ಲಿಟ್ಟಿದ್ದ ಸುಮಾರು 4 ಲಕ್ಷ ನಗದು ಹಣ, ಸೇರಿ ಚಿನ್ನಾಭರಣ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ. ಇನ್ನೂ ಸಂಬಂಧಿಯ ಕಳ್ಳತನದ ಕೃತ್ಯ ಸ್ಥಳೀಯ ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Hubballi Report Kiran Ballari