February 10, 2026

ಚಿತ್ರ ನಟ ಶರಣ, ನಟಿ ಮಾಲಾಶ್ರಿಯಿಂದ ಭಕ್ತಿಗೀತೆಗಳ ಬಿಡುಗಡೆ, ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚಣೆ

ಧಾರವಾಡ:ತಾಲ್ಲೂಕಿನ ಗುಳೇದಕೊಪ್ಪ ಗ್ರಾಮದಲ್ಲಿ ಮಹಾಶಿವರಾತ್ರಿ ನಿಮಿತ್ತ ಶ್ರೀ ಈಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಫೆ.12 ರಿಂದ 16ರ ವರೆಗೆ ನಡೆಯಲಿವೆ.

ಫೆ.12 ರಂದು ಮುಂಜಾನೆ 5.15ಕ್ಕೆ ಮಹಾಗಣಪತಿ ಪೂಜೆ, ಗಣ ಹೋಮ, ಸ್ವಸ್ತಿ ಪುಣ್ಯ ಪೂಜೆ, 13 ರಂದು ಮುಂಜಾನೆ 5.10 ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಉತ್ಸವ ಮೂರ್ತಿ ಅಭಿಷೇಕ, ಮಧ್ಯಾಹ್ನ 2ಗಂಟೆಗ ಕುಂಭದೊಂದಿಗೆ ಊರಿನಲ್ಲಿ ಪಲ್ಲಕ್ಕಿ ಉತ್ಸವ, ಫೆ. 14 ರಂದು ಮುಂಜಾನೆ 5.10ಕ್ಕೆ ಮಹಾರುದ್ರಾಭಿಷೇಕ, ರುದ್ರ‌ ಹೋಮ, ಅಷ್ಟಲಕ್ಷ್ಮೀ ಆರಾಧನೆ, ಫೆ 15 ರಂದು ಕುಂಕುಮಾರ್ಚನೆ, ಮಹಾ ಮೃತ್ಯುಂಜಯ ಹೋಮ, ಮಂಟಪ ದೇವತೆಗಳ ಪೂಜೆ,16 ರಂದು ಮುಂಜಾನೆ 4:10ಕ್ಕೆ ಸಾರ್ವಜನಿಕರಿಂದ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಮಹಾರುದ್ರಾಭಿಷೇಕ, ಮಂಡಲ ಪೂಜೆಗಳು, ಬಲಿ ಪ್ರಧಾನ ಪೂಜೆ, ನವದುರ್ಗ ಹೋಮ, ರತಂಗಿರ ಹೋಮ, ಕಲಾ ಹೋಮ, ಜಯದಾಇ ಹೋಮ, ಮಹಾಪೂರ್ನಾವತಿ ಸಮರ್ಪಣೇ, ಅಷ್ಟೋತ್ತರ ಮತ್ತು ಮಹಾ ಮಂಗಳಾರುತಿ ನಡೆಯಲಿದ್ದು, ಅಂದು ಸಂಜೆ 4.30ಕ್ಕೆ ಮೊದಲಬಾರಿಗೆ ರಥೋತ್ಸವ ನಡೆಯಲಿದ್ದು, ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚನೆ ಮಾಡಲಾಗುವುದು.

ನಿತ್ಯ ಸಂಜೆ 7 ಗಂಟೆಗೆ ವಿವಿಧ ಸ್ವಾಮೀಜಿಗಳಿಂದ ಪ್ರವಚನ ಜರುಗಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 13 ರಂದು ಕನ್ನಡ ಚಲನಚಿತ್ರ ನಟ ಶರಣ್‌ ಅವರಿಂದ “ನೋಡು ಬಾ ಗುಳೇದಕೊಪ್ಪದ ಶಿವರಥೋತ್ಸ”, 14 ರಂದು ನಟಿ ಮಾಲಾಶ್ರೀ ಅವರಿಂದ “ಹರ ಹರ ಈಶ್ವರ” ಭಕ್ತಿಗೀತೆ ಬಿಡುಗಡೆಯಾಗಲಿದೆ. ಅಂದೇ ಶಿಕ್ಷಣ ಇಲಾಖೆ ಹಾಗೂ ಈಶ್ವರ ದೇವರ ಟ್ರಸ್ಟ್‌ ಸಹಯೋಗದಲ್ಲಿ ಶಿಕ್ಷಣ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು, ಲಕ್ಷ್ಮಣ ಪಿರಗಾರ ತಂಡದಿಂದ ಕಿರು ನಾಟಕ ಪ್ರದರ್ಶನವಾಗಲಿದೆ. ಐದು ದಿನಗಳ ಕಾಲ ನಿರಂತರ ಅನ್ನ ಪ್ರಸಾದ ನಡೆಯಲಿದೆ. ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟ್ರಸ್ಟ್‌ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.

Leave a Reply

Your email address will not be published. Required fields are marked *

error: Content is protected !!